ಮಹಾದಾಯಿ ಜಲ ವಿವಾದ ಬಗೆಹರಿಸಲು ಜನವರಿ ಅಂತ್ಯದೊಳಗೆ ಅಥವಾ ಫೆಬ್ರವರಿ ಮೊದಲ ವಾರ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮಹಾದಾಯಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ 'ರೈತ ಸೇನಾ ಕರ್ನಾಟಕ ಸಂಘ'ದ ಪದಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಫೆಬ್ರವರಿ 2ರಂದು ಸರ್ವ ಪಕ್ಷ ಮುಖಂಡರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದೇವೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗುವುದು," ಎಂದು ಹೇಳಿದರು. "ಬಿಜೆಪಿಯವರು ಚುನಾವಣೆ ಸಮೀಪದಲ್ಲಿ ಸಮಸ್ಯೆ ಬಗೆಹರಿಸಿ ಮತದಾರರನ್ನು ಓಲೈಕೆ ಮಾಡಲು ಯತ್ನಿಸುತ್ತಿದ್ದಾರಾ?" ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, "ಬಿಜೆಪಿಯವರನ್ನು ಸಮಸ್ಯೆ ಬಗೆಹರಿಸಬೇಡಿ ಎಂದು ಯಾರು ಹೇಳಿದ್ದಾರೆ? ನೀರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸಮಸ್ಯೆ ಬಗೆಹರಿಸಲು ಮುಂದಾಗಲಿ. ಕೇಂದ್ರದಲ್ಲಿ ಅವರ ಸರ್ಕಾರವೇ ಇದೆ. ಜನರಿಗೆ ಒಳ್ಳೆಯದಾದರೆ ಅವರ ಕೆಲಸವನ್ನು ಸ್ವಾಗತಿಸುತ್ತೇನೆ," ಎಂದರು. <br /> <br /> <br />CM Siddaramaiah had confirmed an all party leader's meeting at the end of this month or on the First week of jan to discuss about Mahadayi issue.